ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕೊಪ್ಪಳ : ನೂತನ ಪಿಂಚಣಿ ಯೋಜನೆ : ಏಪ್ರಿಲ್ ಮಾಹೆಯಿಂದ ವಂತಿಗೆ ಕಡ್ಡಾಯ

ಕೊಪ್ಪಳ : ನೂತನ ಪಿಂಚಣಿ ಯೋಜನೆ : ಏಪ್ರಿಲ್ ಮಾಹೆಯಿಂದ ವಂತಿಗೆ ಕಡ್ಡಾಯ

Wed, 21 Apr 2010 03:05:00  Office Staff   S.O. News Service

ಕೊಪ್ಪಳ ಏ. ೨೦ (ಕರ್ನಾಟಕ ವಾರ್ತೆ): ನೂತನ ಪಿಂಚಣಿ ಯೋಜನೆಯಡಿ ಒಳಪಡುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳ ವಂತಿಗೆಯನ್ನು ಏಪ್ರಿಲ್ ಮಾಹೆಯಿಂದ ಕಡ್ಡಾಯವಾಗಿ ಕಡಿತಗೊಳಿಸಿ ಹೆಚ್.ಆರ್.ಎಮ್.ಎಸ್. ಮೂಲಕ ವೇತನ ಬಿಲ್ಲುಗಳನ್ನು ಸಲ್ಲಿಸುವಂತೆ ಜಿಲ್ಲಾ ಖಜಾನಾಧಿಕಾರಿ ಸಿ. ವಿನಯಕುಮಾರ್ ಅವರು ಸೂಚನೆ ನೀಡಿದ್ದಾರೆ.

 

ದಿನಾಂಕ: ೦೧-೦೪-೨೦೦೬ ರ ನಂತರ ನೇಮಕಾತಿ ಹೊಂದಿರುವ ಸರ್ಕಾರಿ ನೌಕರರಿಗೆ ಸರ್ಕಾರವು ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಗೆ ಒಳಪಡುವ ಎಲ್ಲಾ ಅಧಿಕಾರಿ, ಸಿಬ್ಬಂದಿಯವರ ಏಪ್ರಿಲ್ ತಿಂಗಳ ವಂತಿಗೆಯನ್ನು ಏಪ್ರಿಲ್ ತಿಂಗಳ ವೇತನ ಬಿಲ್ಲಿನಲ್ಲಿ ಹೆಚ್.ಆರ್.ಎಮ್.ಎಸ್. ಮೂಲಕ ಕಡ್ಡಾಯವಾಗಿ ಕಡಿತಗೊಳಿಸಿ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸಬೇಕು. ವಂತಿಗೆಯ ಹಿಂದಿನ ಬಾಕಿ ಪಾವತಿ ಕುರಿತು ಖಜಾನೆಯಿಂದ ಮಾಹಿತಿ ಪಡೆಯಬಹುದಾಗಿದೆ. ನೂತನ ಪಿಂಚಣಿ ಯೋಜನೆಯಡಿ ಏಪ್ರಿಲ್ ತಿಂಗಳ ವಂತಿಗೆಯನ್ನು ಕಡಿತಗೊಳಿಸದಿದ್ದಲ್ಲಿ, ಸಂಬಂಧಪಟ್ಟ ಕಚೇರಿಯ ವೇತನ ಬಿಲ್ಲುಗಳನ್ನು ಖಜಾನೆಯಲ್ಲಿ ಸ್ವೀಕರಿಸಲಾಗುವುದಿಲ್ಲ. ಒಂದು ವೇಳೆ ಕಚೇರಿಯಲ್ಲಿ ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಯಾವುದೇ ಸಿಬ್ಬಂದಿ ಇಲ್ಲದಿದ್ದ ಪಕ್ಷದಲ್ಲಿ, ಈ ಕುರಿತು ವೇತನ ಬಿಲ್ಲಿನ ಮೇಲೆ ಅಗತ್ಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಜಿಲ್ಲಾ ಖಜಾನಾಧಿಕಾರಿ ಸಿ. ವಿನಯಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 

ಕೊಪ್ಪಳ ಏ. ೨೦ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ೧೩೦ ಗ್ರಾಮ ಪಂಚಾಯ್ತಿಗಳಿಗೆ ೨೦೧೦ರ ಮೇ ೦೮ ರಂದು ಚುನಾವಣೆ ಜರುಗಲಿದೆ. ಕೊಪ್ಪಳ ತಾಲೂಕಿನಲ್ಲಿ ೩೫ ಗ್ರಾಮ ಪಂಚಾಯತಿಗಳಲ್ಲಿ ೬೬೨ ಸದಸ್ಯ ಸ್ಥಾನಗಳು, ಗಂಗಾವತಿಯ ೩೮ ಗ್ರಾಮ ಪಂಚಾಯತಿಗಳಲ್ಲಿ ೭೫೪, ಯಲಬುರ್ಗಾದ ೩೩ ಗ್ರಾ.ಪಂ. ಗಳಲ್ಲಿ ೫೫೯ ಹಾಗೂ ಕುಷ್ಟಗಿ ತಾಲೂಕಿನ ೨೮ ಗ್ರಾಮ ಪಂಚಾಯತಿಗಳಲ್ಲಿ ೫೪೨ ಸೇರಿದಂತೆ ಜಿಲ್ಲೆಯ ಒಟ್ಟು ೧೩೦ ಗ್ರಾಮ ಪಂಚಾಯತಿಗಳ ೨೫೧೭ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

 

ಜಿಲ್ಲೆಯ ೧೩೪ ಗ್ರಾಮ ಪಂಚಾಯಿತಿಗಳ ಪೈಕಿ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ, ಗಂಗಾವತಿ ತಾಲೂಕಿನ ಸಿದ್ದಾಪುರ ಮತ್ತು ಮುಸ್ಟೂರು ಹಾಗೂ ಕುಷ್ಟಗಿ ತಾಲೂಕಿನ ಕಬ್ಬರಗಿ ಸೇರಿದಂತೆ ೦೪ ಗ್ರಾಮ ಪಂಚಾಯಿತಿಗಳ ಅವಧಿಯು ೨೦೧೦ ರ ಜುಲೈ ನಂತರ ಮುಕ್ತಾಯಗೊಳ್ಳುವುದರಿಂದ, ಈ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ, ಉಳಿದ ೧೩೦ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.

 

 

ಪ್ರತಿಯೊಂದು ಗ್ರಾಮ ಪಂಚಾಯ್ತಿಯು ಹೊಂದಿರುವ ಸದಸ್ಯ ಸ್ಥಾನಗಳ ವಿವರ ಇಂತಿದೆ. ಕೊಪ್ಪಳ ತಾಲ್ಲೂಕಿನ ಕವಲೂರು ಗ್ರಾಮ ಪಂಚಾಯ್ತಿ ೨೦ ಸದಸ್ಯ ಸ್ಥಾನಗಳನ್ನು ಹೊಂದಿದೆ. ಹಟ್ಟಿ -೧೬, ಅಳವಂಡಿ-೧೯, ಬೋಚನಹಳ್ಳಿ-೧೭, ಬೆಟಗೇರಿ-೧೫, ಮತ್ತೂರು-೧೯, ಕಾತರಕಿ-ಗುಡ್ಲಾನೂರು-೧೭, ಬಿಸರಳ್ಳಿ-೧೭, ಹಿರೇಸಿಂದೋಗಿ-೧೫, ಕೋಳೂರು-೧೮, ಹಲಗೇರಿ-೧೬, ಭಾಗ್ಯನಗರ-೩೨, ಓಜನಹಳ್ಳಿ-೧೯, ಮಾದಿನೂರು-೧೫, ಕಿನ್ನಾಳ-೨೩, ಲೇಬಗೇರಿ-೨೦, ಇರಕಲ್ಲಗಡ-೨೩, ಚಿಕ್ಕಬೊಮ್ಮನಾಳ-೧೭, ಹಾಸಗಲ್-೨೧, ತಾವರಗೇರಾ-೨೦, ಇಂದರಗಿ-೧೭, ಬೂದಗುಂಪಾ-೨೦, ಬಂಡಿಹರ್ಲಾಪುರ-೧೭, ಶಿವಪುರ-೧೩, ಹುಲಿಗಿ-೧೯, ಮುನಿರಾಬಾದ್ (ಯೋಜನಾ ಗ್ರಾಮ)- ೨೩, ಹೊಸಳ್ಳಿ- ೨೧, ಅಗಳಕೇರಾ- ೧೭, ಹಿಟ್ನಾಳ- ೨೧, ಗುಳದಳ್ಳಿ- ೧೪, ಗಿಣಿಗೇರಾ- ೨೫, ಹಿರೇಬಗನಾಳ- ೧೮, ಕುಣಿಕೇರಿ-೨೧, ಗೊಂಡಬಾಳ- ೧೬ ಹಾಗೂ ಬಹದ್ದೂರ ಬಂಡಿ ಗ್ರಾಮ ಪಂಚಾಯತಿಯು ೨೧ ಸದಸ್ಯ ಸ್ಥಾನಗಳನ್ನು ಹೊಂದಿದೆ.

 

 

ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮ ಪಂಚಾಯತಿಯು ೧೮ ಸದಸ್ಯ ಸ್ಥಾನಗಳನ್ನು ಹೊಂದಿದ್ದು, ತುಗ್ಗಲದೋಣಿ- ೧೬, ಹನಮನಾಳ- ೩೨, ಮಾಲಗಿತ್ತಿ- ೧೭, ಜಾಗೀರಗುಡದೂರ- ೧೯, ಯರಗೇರಾ- ೧೯, ಹನುಮಸಾಗರ- ೩೩, ಕಾಟಾಪುರ- ೧೮, ಹೂಲಗೇರಾ- ೧೫, ಅಡವಿಬಾವಿ- ೧೮, ಚಳಗೇರಾ- ೧೯, ಬೆನಕನಾಳ- ೧೯, ಹಿರೇಗೊಣ್ಣಾಗರ- ೧೭, ಹಿರೇಬನ್ನಿಗೋಳ-೧೫, ಕೊರಡಕೇರಾ- ೧೮, ತಳುವಗೇರಾ- ೧೭, ಬಿಜಕಲ್- ೨೩, ದೋಟಿಹಾಳ- ೧೯, ಕ್ಯಾದಿಗುಪ್ಪ- ೧೯, ಮುದೇನೂರ- ೨೩, ಕಂದಕೂರ- ೨೨, ಹಿರೇಮನ್ನಾಪುರ- ೨೨, ಜುಮಲಾಪುರ- ೨೦, ಕಿಲ್ಲಾರಹಟ್ಟಿ- ೧೮, ತಾವರಗೇರಾ- ೩೭, ಮೆಣೆದಾಳ- ೨೦ ಹಾಗೂ ಸಂಗನಾಳ ಗ್ರಾ.ಪಂ. ೧೯ ಸದಸ್ಯ ಸ್ಥಾನ ಹೊಂದಿದೆ.

 

 

ಯಲಬುರ್ಗಾ ತಾಲೂಕಿನಲ್ಲಿ ಮುಧೋಳ ಗ್ರಾಮ ಪಂಚಾಯತ್ ೧೮ ಸದಸ್ಯ ಸ್ಥಾನ ಹೊಂದಿದೆ. ಅದೇ ರೀತಿ ಕರಮುಡಿ- ೧೭, ಬಳ್ಳೂಟಗಿ- ೧೭, ಬಂಡಿ- ೧೯, ಗೆದಿಗೇರಿ- ೨೦, ವಜ್ರಬಂಡಿ- ೧೯, ಹಿರೇ‌ಅರಳಹಳ್ಳಿ- ೧೮, ಮಾಟಲದಿನ್ನಿ- ೧೭, ಹಿರೇವಂಕಲಕುಂಟಾ- ೧೭, ತಾಳಕೇರಿ- ೧೯, ಗಾಣದಾಳ- ೧೯, ಗುನ್ನಾಳ- ೧೭, ಬೇವೂರ- ೧೬, ಕುದರಿಮೋತಿ- ೨೧, ಹಿರೇಬಿಡನಾಳ- ೧೬, ಮಂಗಳೂರ- ೨೦, ವಣಗೇರಿ- ೧೮, ಮುರಡಿ- ೧೬, ಚಿಕ್ಕಮ್ಯಾಗೇರಿ- ೧೮, ಬಳಗೇರಿ- ೧೬, ಶಿರೂರ- ೧೬, ಬೆಣಕಲ್- ೧೬, ಭಾನಾಪುರ- ೧೮, ತಳಕಲ್- ೧೭, ಇಟಗಿ- ೧೪, ಬನ್ನಿಕೊಪ್ಪ- ೧೩, ಮಂಡಲಗೇರಿ- ೧೭, ಯರೇಹಂಚಿನಾಳ- ೧೭, ಸಂಗನಾಳ- ೮, ಕಲ್ಲೂರ- ೯, ರಾಜೂರ- ೧೬ ಹಾಗೂ ಕುಕನೂರ ಗ್ರಾಮ ಪಂಚಾಯತಿಯು ೪೦ ಸದಸ್ಯ ಸ್ಥಾನಗಳ ಬಲ ಹೊಂದಿದೆ.

 

ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾ.ಪಂ. ೧೮ ಸದಸ್ಯ ಸ್ಥಾನ ಹೊಂದಿದೆ. ಸಂಗಾಪುರ- ೧೪, ಮಲ್ಲಾಪುರ- ೧೪, ಚಿಕ್ಕಜಂತಕಲ್- ೨೩, ಡಣಾಪುರ- ೨೫, ಉಳೆನೂರು- ೧೮, ಬೆನ್ನೂರು- ೧೪, ಬೂದಗುಂಪಾ- ೨೦, ಯರಡೋಣಾ- ೧೮, ಶ್ರೀರಾಮನಗರ- ೨೩, ಮರಳಿ- ೨೦, ವಡ್ಡರಹಟ್ಟಿ- ೩೦, ಬಸಾಪಟ್ಟಣ- ೧೯, ವೆಂಕಟಗಿರಿ- ೧೯, ಆಗೋಲಿ- ೧೨, ಚಿಕ್ಕಬೆಣಕಲ್- ೧೮, ಚಿಕ್ಕಮಾದಿನಾಳ- ೧೬, ಸುಳೇಕಲ್- ೧೪, ಹಿರೇಖೇಡ- ೧೫, ಕೇಸರಹಟ್ಟಿ- ೨೨, ಹೇರೂರು- ೨೧, ಹೊಸಕೇರಾ- ೧೬, ಹಣವಾಳ- ೧೮, ಗುಂಡೂರು- ೨೪, ಮರ್‍ಲಾನಹಳ್ಳಿ- ೧೮, ಹುಳ್ಕಿಹಾಳ- ೧೮, ಕಾರಟಗಿ- ೬೨, ಚಳ್ಳೂರು- ೨೧, ಚಿಕ್ಕಡಂಕನಕಲ್- ೨೩, ಕನಕಗಿರಿ- ೩೭, ಗೌರಿಪುರ- ೧೬, ಹುಲಿಹೈದರ- ೨೬, ಕರಡೋಣಾ- ೧೬, ನವಲಿ- ೨೨, ಬೇವಿಹಾಳ- ೨೮, ಹಾಗೂ ಮುಸಲಾಪುರ- ೧೬ ಗ್ರಾ.ಪಂ. ೨೯ ಸದಸ್ಯ ಸ್ಥಾನಗಳನ್ನು ಹೊಂದಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


Share: